ಈ ವಾರ ತೆರೆಗೆ `ಶಿವಂ`
Posted date: 31 Wed, Dec 2014 – 09:39:37 AM

ತನ್ವಿ ಫ಼ಿಲಂಸ್ ಲಾಂಛನದಲ್ಲಿ ಸಿ.ಆರ್.ಮನೋಹರ್ ನಿರ್ಮಿಸಿರುವ ‘ಶಿವಂ‘ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
 ಶ್ರೀನಿವಾಸರಾಜು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ  ಮಣಿಶರ್ಮ ಸಂಗೀತ ನೀಡಿದ್ದಾರೆ. ವೆಂಕಟ್‌ಪ್ರಸಾದ್ ಛಾಯಾಗ್ರಹಣ, ವಿನೋದ್ ಮನೋಹರ್ ಸಂಕಲನ, ವಿಜಯ್, ಶಿವಶಂಕರ್, ಪ್ರದೀಪ್ ಅಂತೋಣಿ ಹಾಗೂ ರಘು ನೃತ್ಯ ನಿರ್ದೇಶನ, ಕಣಲ್ ಕಣ್ಣನ್, ಥ್ರಿಲ್ಲರ್ ಮಂಜು ಹಾಗೂ ರವಿವರ್ಮ ಸಾಹಸ ನಿರ್ದೇಶನ, ಮೋಹನ್.ಬಿ.ಕೆರೆ ಕಲಾ ನಿರ್ದೇಶನವಿರುವ  ಈ ಚಿತ್ರದ ಹಾಡುಗಳನ್ನು ಕೆ.ಕಲ್ಯಾಣ್ ಹಾಗೂ ಡಾ:ನಾಗೇಂದ್ರಪ್ರಸಾದ್ ರಚಿಸಿದ್ದಾರೆ. ಸಂಭಾಷಣೆಯನ್ನು ಗುರುರಾಜ್.ಎಂ.ದೇಸಾಯಿ ಬರೆದಿದ್ದಾರೆ.
ಸೂಪರ್‌ಸ್ಟಾರ್ ಉಪೇಂದ್ರ ಅವರು ನಾಯಕನಾಗಿ ಅಭಿನಯಿಸಿರುವ ಈ ಚಿತ್ರದ ತಾರಾಬಳಗದಲ್ಲಿ ರಾಗಿಣಿ, ಸಲೋನಿ, ಶ್ರೀನಿವಾಸಮೂರ್ತಿ, ಗೀತಾ, ಭವ್ಯ, ದೊಡ್ಡಣ್ಣ, ಸಿ.ಆರ್.ಗೋಪಿ, ಶಿವರಾಂ, ರವಿಶಂಕರ್, ಮಕರಂದ್ ದೇಶಪಾಂಡೆ, ಲಕ್ಷ್ಮಣ್, ಶರತ್ ಲೋಹಿತಾಶ್ವ, ಮುನಿ, ಕಿಟ್ಟಿ ಮುಂತಾದವರಿದ್ದಾರೆ.  

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed